ಹಿಂದುಯಿಜಂ ಮಾತ್ರವೇ ಉತ್ತರಿಸಬಲ್ಲ ಪ್ರಶ್ನೆಗಳು

ಹಿಂದುಯಿಜಂ ಮಾತ್ರವೇ ಉತ್ತರಿಸಬಲ್ಲ ಪ್ರಶ್ನೆಗಳು
ಇಲ್ಲಿ ದೇವರನ್ನು, ಸೃಷ್ಠಿಯನ್ನು, ‘ನಾನು’ ಎಂದರೇನು ಮತ್ತು ಮೋಕ್ಷವನ್ನು ಕುರಿತಂತಹ ೧೭೦ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಹಿಂದುಯಿಜಂ ಉತ್ತರವನ್ನು ಪಡೆಯುವಿರಿ. ಇದು ಹೇಗೆಂದರೆ ಎಲ್ಲ ಪ್ರಶ್ನೆಗಳೇ ಕರಗಿ ಹೋಗುವಂತಹ ತಾಯಿಯ ಮಡಿಲನ್ನು ಕಂಡುಕೊಳ್ಳುವ ಹಾಗೆ........
Order Now!
About the Book

ಯಾರು ‘ನಾನು’?

ನಾನು ಏನು ಮಾಡಬೇಕು – ಕರ್ತವ್ಯ ಏನು ??

ನನ್ನ ಜೀವನದ ಉದ್ದೇಶವೇನು ?

ದೇವರು ಇದ್ದಾನೆಯೇ ?

ದೇವರು ಇದ್ದಾನೆಂದರೆ ಅವನು/ ಅವಳು  ನನ್ನನ್ನು ಏಕೆ ಸೃಷ್ಥಿಸಿದನು/ಳು?

ಯಾವ ‘ರಿಲಿಜಿಯನ್’ ಸತ್ಯವಾದದ್ದು ?

ಪ್ರತಿ ಮಗುವೂ ಮೇಲಿನ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹೊಂದಿರುತ್ತದೆ. ಆದರೆ, ನಿಧಾನವಾಗಿ ‘ಲಾ ಆಫ್ ಬ್ಲಾಸ್ಫೆಮಿ’ಯು {ನಮಗೆ ಉತ್ತರ ಗೊತ್ತಿಲ್ಲದ್ದರಿಂದ ‘ಹಾಗೆಲ್ಲ ಪ್ರಶ್ನಿಸ ಕೂಡದು….ಅಭಾಸವಾಗುತ್ತದೆ’ ಎಂದು ಮಕ್ಕಳನ್ನು ಸುಮ್ಮನಾಗಿಸುವ ಕ್ರಿಯೆಯು ಪ್ರಶ್ನೆಯನ್ನು ಕೇಳುವ – ಉತ್ತರವನ್ನು ಹುಡುಕುವ ಉತ್ಸಾಹವನ್ನೇ ಚಿವುಟಿ ಹಾಕುತ್ತದೆ. ಅವರಿಗೆ ಎಲ್ಲಿ ಉತ್ತರ/ ಉತ್ತೇಜನ ದೊರೆಯುವುದೋ ಅದರೆಡೆಗೆ ಬಾಗುವರು. ಇದನ್ನು ಪಾಶ್ಚಾತ್ಯ ಮತೀಯರು, ದೇಶ ವಿಭಾಜಕ ಶಕ್ತಿಗಳೂ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.} ಅವರನ್ನು ಸುಮ್ಮನಾಗಿಸುತ್ತಿದೆ. ಏಕೆಂದರೆ ಹಲವು ‘ರಿಲಿಜಿಯನ್’ಗಳಲ್ಲಿ ಪ್ರಶ್ನೆ ಕೇಳುವುದು ದೇವರಿಗೆ ಅವಮಾನ ಮಾಡಿದಂತೆ. ಪದ್ಧತಿಗಳು ಪ್ರಶ್ನೆಗಳನ್ನು ಎತ್ತದಂತೆ ಮಾಡುತ್ತವೆ.ಅಭಾಸಗಳ ಭಯವು ಸತ್ಯಕ್ಕಾಗಿ ಹುಡುಕುವುದನ್ನೇ ತಡೆಯುವುದು.

ನೀವು ಅಭಾಸಗಳು ಮತ್ತು ಭಯಗಳಿಂದಲೇ ಸುತ್ತುವರಿದಾಗ ಹಿಂದುಯಿಜಂ ನಿಮ್ಮ ರಕ್ಷಣೆಗೆ ಬರುತ್ತದೆ. ನೀವು ನಿಮ್ಮ ದೇವರನ್ನು ಪ್ರಶ್ನಿಸದಿರಬಹುದು, ಆದರೆ ಹಿಂದೂ ದೇವತೆ ನಿಮ್ಮನ್ನು ಪ್ರಶ್ನೆಗಳನ್ನು ಕೇಳಲು, ಸಂವಾದ ನಡೆಸಲು, ಅಣಕಿಸಲು, ಅವಳನ್ನು ನಿರಾಕರಿಸಲೂ   ಆಹ್ವಾನಿಸುತ್ತಾಳೆ. ಆಭಾಸವೇ ಇಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ದೊರೆತರೆ ಒಪ್ಪಿಕೊಳ್ಳಿ-ಇಲ್ಲವಾದರೆ ಬಿಡಿ.

ಅನ್ಯ ಮತಗಳಲ್ಲಿ ನೀವು ದೇವರಡಿಯ ಗುಲಾಮರು. ಹಿಂದೂಯಿಜಂನಲ್ಲಿ ನೀನು ದೇವರ ಮಗು. ಅನ್ಯಮತದಲ್ಲಿ ನೀವು ನರಕದ ಭಯದಿಂದ ಒಳ್ಳೆಯ ಕೆಲಸವನ್ನು ಮಾಡುವಿರಿ. ಹಿಂದೂಯಿಜಂನಲ್ಲಿ ತಾಯಿದೇವಿಯನ್ನು ಪ್ರೀತಿಸುವಿರಿ. ಆ ಪ್ರೀತಿಯಿಂದ ಸತ್ಕಾರ್ಯಗಳನ್ನು ಮಾಡುವಿರಿ. ಹಿಂದುಯಿಜಂ ಎಂದರೆ ಸರ್ವಶಕ್ತ ದೇವನ ಕೈ ಹಿಡಿದು ಪ್ರೇಮದಿಂದ ನಗು ನಗುತ್ತಾ ವಿನೋದದಿಂದ ಮಾತು ಮತ್ತು ಪ್ರಶ್ನೋತ್ತರಗಳೊಂದಿಗೆ ಜೊತೆಗೆ ನಡೆಯುವುದೇ ಆಗಿದೆ. ನಿನಗೆ ಆಯಾಸವಾದಾಗ ಮಾತೆಯು ನಿನ್ನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ನಡೆಯುವಳು. ಸಂಕಷ್ಟದಲ್ಲಿದ್ದಾಗ ನಿನ್ನ ರಕ್ಷಣೆ ಮಾಡುವಳು.

ಈ ಪುಸ್ತಕವು ನೂರೆಪ್ಪತ್ತಕ್ಕೂ ಹೆಚ್ಚು, ಬೇರೆ ಎಲ್ಲ ‘ರಿಲಿಜಿಯನ್’ಗಳೂ ಉತ್ತರಿಸಲಾಗದೆ ಸೋತಿರುವ, ಪ್ರಶ್ನೆಗಳನ್ನು ಕುರಿತು ಹೇಳುತ್ತದೆ. ಕೊನೆಗೆ ನಿಮಗೆ ಇತರರು ಏಕೆ ಸೋತರು ಎಂದು ತಿಳಿಯುವುದು, ಏಕೆಂದರೆ ನಾವು ಹುಡುಕುತ್ತಿರುವುದು ಪ್ರಶ್ನೆಗೆ ಉತ್ತರವನ್ನಷ್ಟೇ ಅಲ್ಲ; ಯಾರ ಮಡಿಲಿನಲ್ಲಿ ಎಲ್ಲ ಪ್ರಶ್ನೆಗಳೂ ಮಾಯವಾಗುವುವೋ ಆ ತಾಯಿಯ ಮಡಿಲನ್ನು ಕಂಡುಕೊಳ್ಳುವುದೇ ಆಗಿದೆ………

Facebook Comments

Details