ವೇದ ಮತ್ತು ದಾಸ

Vedas-and-Daas--

This post is also available in English at http://agniveer.com/843/vedas-and-daas/

ಶೂದ್ರದ ಪರ್ಯಾಯ ಪದವೇ ದಾಸ ಮತ್ತು ದಾಸರನ್ನು ವಶದಲ್ಲಿಟ್ಟಿಕೋ ಎಂದು ವೇದ ಕರೆಗೊಡುತ್ತದೆ ಎಂಬ ಸಾಮಾನ್ಯ ಪರಿಕಲ್ಪನೆ ನಮ್ಮಲ್ಲಿದೆ. ಬನ್ನಿ ವೇದ ಮಂತ್ರಗಳು ’ದಾಸ’ ಎಂಬ ಪದದ ಬಗ್ಗೆ ಏನು ಹೇಳುತ್ತದೆ ನೋಡೋಣ.

ಋಗ್ವೇದ ೭.೧.೨೧

ನಮ್ಮ ಶ್ರೇಷ್ಠ ಯೋಧರು ದಾಸರಾಗದೆ ಇರಲಿ ಅಥವ ನಾಶವಾಗದಿರಲಿ

ಋಗ್ವೇದ ೬.೫.೪

ಅವಿತುಕೊಂಡು ನಮಗೆ ತೂಂದರೆಕೂಡುವವರು ನಾಶವಾಗಲಿ (ಅಭಿದಾಸತ್). ಇಲ್ಲಿ ದಾಸ ಎಂಬ ಪದವು ಕ್ರಿಯಾಪದವಾಗಿ ನಾಶಪಡಿಸುವುದು ಎಂದು ಅರ್ಥವಾಗಿದೆ.

ಋಗ್ವೇದ ೭.೧೦೪.೭

ದ್ವೇಷದಿಂದ ನಮ್ಮನ್ನು ನಾಶಪಡಿಸಲು (ಅಭಿದಾಸತಿ) ಯತ್ನಿಸುವವನಿಗೆ ಅನುಕೂಲವಾಗದಿರಲಿ

ಋಗ್ವೇದ ೧೦.೯೭.೨೩

ನಮ್ಮನ್ನು ನಾಶಪಡಿಸಲು (ಅಭಿದಾಸತಿ) ಇಚ್ಛಿಸುವ ನಮ್ಮ ಶತ್ರುವು ನಾಶವಾಗಲಿ. ಈ ಎಲ್ಲಾ ಮಂತ್ರಗಳಲ್ಲಿಯೂ ದಾಸ ಎಂಬುದರ ಅರ್ಥ ನಾಶ ಎಂಬುದಾಗಿದೆ. ಅನೇಕ ಮಂತ್ರಗಳು ’ದಾಸ’ ನ ಮೂಲ ಪದ ’ದಾಸ್’ ಎನ್ನುವುದನ್ನೂ ಬಳಸಲಾಗಿದೆ.

ಋಗ್ವೇದ ೧೦.೧೧೭.೨

ದಾನಿಯ ಸಂಪತ್ತು ಎಂದಿಗೂ ನಾಶವಾಗುವುದಿಲ್ಲ (ಉಪದಾಸ್ಯತಿ).

ಋಗ್ವೇದ ೫.೫೪.೭

ಪರಮದೇವನಿಂದ ಸ್ಪೂರ್ತಿ ಹೂಂದುವವನ ಸಂಪತ್ತು ಮತ್ತು ಪ್ರಗತಿ ಏಂದಿಗೂ ನಾಶವಾಗುವುದಿಲ್ಲ (ಉಪದಾಸ್ಯತಿ).

ಇಲ್ಲಿಯೂ ಸಹ ’ದಾಸ’ ಎಂಬ ಪದದ ಅರ್ಥ ನಾಶ ಎಂದೇ ಹೊರೆತು ಯಾವುದೇ ಜಾತಿ ಅಥವ ವರ್ಣ ಎಂದಲ್ಲ.

’ದಾಸ’ ಪದದ ಬಳಕೆ

ದಾಸ ಪದದ ನೇರ ಬಳಕೆಯನ್ನು ಮಾಡಿದ ಕೆಲವು ಮಂತ್ರಗಳನ್ನು ವಿಶ್ಲೇಶಿಸೋಣ

ಋಗ್ವೇದ ೨.೧೨.೪

ದಾಸರನ್ನು ಅಥವ ವಿನಾಶಕಾರಿ ಜನರನ್ನು ಕೆಳಗಿಳಿಸಬೇಕು

ಋಗ್ವೇದ ೫.೩೪.೬

ಆರ್ಯರು ದಾಸರನ್ನು ಅಥವ ವಿನಾಶಕಾರಿ ಜನರನ್ನು ನಿಯಂತ್ರಿಸಬೇಕು

ಋಗ್ವೇದ ೬.೨೬.೫

ಸಮಾಜದಲ್ಲಿರುವ ಶಾಂತಿಯನ್ನು ನಾಶಮಾಡುವ ದಾಸರನ್ನು ನಾಶಮಾಡಬೇಕು. ಇಲ್ಲಿ ಶಂಭರ್ ಎಂಬ ಗುಣವಾಚಕವನ್ನು ದಾಸಕ್ಕೆ ಬಳಸಲಾಗಿದೆ. ಇದರರ್ಥ ಶಾಂತಿಯ ವಿರುದ್ಧವಾಗಿರುವುದು.

ಋಗ್ವೇದ ೭.೧೯.೨

ದರೋಡೆಕೋರರನ್ನು (ಶುಶ್ಲಂ), ಭಯೋತ್ಪಾದಕರನ್ನು (ಕುಯವಂ), ದಾಸರನ್ನು (ಒಳ್ಳೆಯದನ್ನು ವಿನಾಶಮಾಡುವವನನ್ನು) ನಿಯಂತ್ರಿಸು.

ಋಗ್ವೇದ ೧೦.೪೯.೬

ಪಾಪಿಗಳಾಗಿ ಅವತರಿಸಿದ ದಾಸರನ್ನು ನಾಶಮಾಡು.

ಇದು ಸ್ಪಷ್ಟಪಡಿಸುವುದೇನೆಂದರೆ ನಾಶಪಡಿಸುವ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ದಾಸ ಎಂದು ಕರೆಯಲಾಗಿದೆ. ಯಾವುದೇ ನಾಗರೀಕ ಸಮಾಜದಲ್ಲಿ ಇಂತಹ ವ್ಯಕ್ತಿಗಳು ನಾಶವಾಗಲಿಕ್ಕೆ ಅರ್ಹರಾಗುತ್ತರೆ. ಇದಕ್ಕೆ ಧರ್ಮಾಂಧ ದಾಸರಾಗಿದ್ದ ಓಸಾಮ ಬಿನ್ ಲಾಡನ್, ಕಸಬ್ ಉತ್ತಮ ಉದಹರಣೆಯಾಗಿದ್ದಾರೆ.

ವೇದಗಳಲ್ಲಿ ಶೂದ್ರರನ್ನು ದಾಸರೆಂದು ಎಲ್ಲಿಯೂ ಉಲ್ಲೇಖಿಸಿಲ್ಲ.

ಅತ್ಯಂತ ಬೇಸರದ ಸಂಗತಿ ಎಂದರೆ, ವೇದಗಳ ನಿಜವಾದ ಸಂದೇಶವನ್ನರಿಯದೆ, ಶೂದ್ರರೇ ದಾಸರೆಂದು ಅರ್ಥಮಾಡಿಕೊಂಡಿರುವುದು. ಈ ತಪ್ಪು ತಿಳುವಳಿಕೆ ನಿನ್ನೆ ಮೂನ್ನೆಯದಲ್ಲ ಬದಲಾಗಿ ಈ ತಪ್ಪನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಈಗಲೂ ಸಹ ಶೂದ್ರ ಎಂಬುದು ಒಂದು ಆಕ್ಷೇಪಣಾ ಪದವೆಂದು ಮತ್ತು ದಾಸ ಎಂಬುದು ಗುಲಾಮ ಎಂದು ಅನೇಕರು ಭಾವಿಸಿದ್ದಾರೆ.

ವೇದಗಳಿಂದ ಯಾವುದೂ ದೂರವಿಲ್ಲ

ಯುರೋಪಿಯನ್ನರು ಯುದ್ಧ ಖೈದಿಗಳನ್ನು ಇಡಲು ಆಸ್ಟ್ರೇಲಿಯಾ ಖಂಡವನ್ನು ಬಳಸಿಕೊಂಡರು, ನಂತರ ಆ ಖೈದಿಗಳಿಂದಲೇ ಆಸ್ಟ್ರೇಲಿಯಾ ರಾಷ್ಟ್ರದ ಉಗಮವಾಯಿತು. ಹೀಗೆಯೇ ಅಪರಾಧಿಗಳನ್ನು ಬಂಧಿಸಿದಾಗ ಅವರಿಂದ ಅನೇಕ ಕಷ್ಟಕರ ಕೆಲಸಗಳನ್ನು ಮಾಡಿಸಿ ಕೊಳ್ಳುತ್ತಿದ್ದರು. ಹೀಗೆ ಕಾಲ ಉರುಳಿದಂತೆ ಕೆಲಸ ಮಾಡುವವರ ಮುಂದಿನ ಜನಾಂಗವನ್ನೂ ದಾಸ ಎಂದು ಕರೆಯುತ್ತಾ ಅದು ಮುಂದೆ ದಾಸ ಎಂದರೆ ಆಳು ಎಂದು ಅರ್ಥ ಹೊಂದಿತು. ಇದು ಹೆಚ್ಚು ಕಡಿಮೆ ಆರ್ಯರು ತಮ್ಮನ್ನು ತಾವೇ ಹಿಂದುಗಳೆಂದು ಕರೆದುಕೊಂಡದಕ್ಕೆ ಸಮವಾಗಿದೆ.

ವಾಸ್ತವಾಂಶದಲ್ಲಿ ದಾಸ ಎಂಬುದಕ್ಕೆ ಸಮನಾರ್ಥಕ ಪದ ದಸ್ಯು ಅಥವ ಅಪರಾಧಿ

ಆರ್ಯರಲ್ಲಿ ಶೂದ್ರ ಎಂಬುದು ಒಂದು ವೃತ್ತಿಗೆ ಸಂಬಂಧಿಸಿದ್ದು ಅಥವ ಪರೋಪಕಾರಿ ವೃತ್ತಿಯಲ್ಲಿ ತೊಡಗಿರುವವರಾಗಿರುತ್ತಾರೆ . ವೇದದಲ್ಲಿ ಸುಮಾರು ೩೬ ಮಂತ್ರಗಳಲ್ಲಿ ಆರ್ಯ ಎಂಬ ಪದದ ಬಳಕೆ ಇದ್ದು, ಅದೆಲ್ಲವೂ ಒಳ್ಳೆಯ ಕೆಲಸವನ್ನು ಮಾಡುವವರಿಗೆ ಆರ್ಯ ಎಂದು ಕರೆಯಲಾಗಿದೆ. ಆದ್ದರಿಂದ ಪ್ರಪಂಚದ ಎಲ್ಲಾ ಓಳ್ಳೆಯ ನಾಗರೀಕರು ಶೂದ್ರರನ್ನೊಳಗೊಂಡಂತೆ ಆರ್ಯರಾಗುತ್ತಾರೆ.

 

ಹಾಗಾಗಿ ಶೂದ್ರರು ದಾಸರಲ್ಲ ಬದಲಾಗಿ ಆರ್ಯರು.

 

Translated by Harshawardhan

The 4 Vedas Complete (English)

The 4 Vedas Complete (English)

Buy Now
Print Friendly

More from Agniveer

Comments

  1. Vishwa says

    Hi..
    I am speech less…… sir i want to read all vedas in kannada. can you send any books or links please…

Leave a Reply

Your email address will not be published. Required fields are marked *

 characters available